11/08/2024
💭 ಒಲವಾಗಿರೊ ಚಿಗುರೊಡೆದ ಮೊದಮೊದಲ ಪ್ರೀತಿಗೆ ಸಿಕ್ಕಿರೊ ಮುಂಗಾರಿನ ಮಳೆ ಹನಿ ನೀನು,
ಚಿಪ್ಪಲ್ಲೆ ಬಚ್ಚಿಟ್ಟು ಮುತ್ತಿಡಲ ? ಬುಜತಾಕಿ ಎದೆಗೊರಗಿ ಪಿಸುಗುಡಲ ?
ನೀನಾದೆ ಪ್ರತಿದಿನವು ನನ್ನೆಲ್ಲ ಚಟುವಟಿಕೆ, ಮತ್ತೇಕೆ ದೂರಲಿ ನೆನಪಿಗೆ ನೆನಪೆಲ್ಲ ಬರಿ ಪೀಟಿಕೆ,
ಈಗಂತೂ ನಾನೀಗ ನೀನಿರದೆ ನಾನಿಲ್ಲ, ಸ್ವರ್ಗದ ಸಾನಿಧ್ಯ ನೀನಿರಲು ಬೇರೆನು ಬೇಕಿಲ್ಲ.
ನನ್ನೆಲ್ಲ ಪ್ರತಿ ಹಸಿ ಹುಸಿ ಖುಷಿ ಪಿಸು ನಗೆ ಮುನಿಸಲ್ಲು ನಿನ್ನನ್ನೆ ಹುಡುಕು,
ಒಲವೆಂಬ ಬೀದಿಯ ಪ್ರತಿ ಗಲ್ಲಿಗಳಲ್ಲು ನೀನಾಗೆ ಎದುರಾಗಿ ದೊರಕು...