25/06/2026
🌿 Another Milestone for Gramajanya! 🌿
Gramajanya Farmers Producer Company Limited proudly inaugurated its Modern Cold Storage Facility, marking a significant step towards strengthening post-harvest infrastructure for farmers and food businesses in the region.
The facility was inaugurated by Hon'ble MLC Shri Kishore Kumar, who lit the ceremonial lamp and officially dedicated the cold storage to the public.
On this occasion, the first customers of the facility, Abhijnana Foods (Nitya Chapathi) and Pingara Farmers Producer Company, were felicitated. Shri Keshava Prasad Muliya, who first highlighted the need for a cold storage facility in Puttur during the Jackfruit Mela, was also honoured for his vision and encouragement.
The cold storage is designed to benefit farmers, food processors, fruit and vegetable traders, bakeries, juice centres, florists, hotels and other businesses by ensuring safe, hygienic and temperature-controlled storage.
We sincerely thank all our dignitaries, directors, members, staff, customers, farmers and well-wishers for making this milestone a grand success.
"Empowering Farmers through Sustainable Infrastructure." 🌱
---
🌿 ಗ್ರಾಮಜನ್ಯದ ಮತ್ತೊಂದು ಮಹತ್ವದ ಮೈಲಿಗಲ್ಲು! 🌿
ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ನಿಯಮಿತದ ವತಿಯಿಂದ ನಿರ್ಮಿಸಲಾದ ಆಧುನಿಕ ಶೈತ್ಯಾಗಾರ ಇಂದು ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಯಿತು. ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಅವರು ದೀಪ ಪ್ರಜ್ವಲನೆ ಹಾಗೂ ಶೈತ್ಯಾಗಾರದ ದ್ವಾರ ಉದ್ಘಾಟಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶೈತ್ಯಾಗಾರದ ಪ್ರಥಮ ಗ್ರಾಹಕರಾದ ಅಭಿಜ್ಞಾನ ಫುಡ್ಸ್ (ನಿತ್ಯ ಚಪಾತಿ) ಹಾಗೂ ಪಿಂಗಾರ ರೈತ ಉತ್ಪಾದಕ ಕಂಪನಿಯನ್ನು ಸನ್ಮಾನಿಸಲಾಯಿತು. ಪುತ್ತೂರಿಗೆ ಶೈತ್ಯಾಗಾರದ ಅಗತ್ಯತೆಯನ್ನು ಮೊದಲು ಪ್ರಸ್ತಾಪಿಸಿ ಈ ಯೋಜನೆಗೆ ಪ್ರೇರಣೆ ನೀಡಿದ ಶ್ರೀ ಕೇಶವ ಪ್ರಸಾದ್ ಮುಳಿಯ ಅವರನ್ನೂ ಗೌರವಿಸಲಾಯಿತು.
ಈ ಶೈತ್ಯಾಗಾರವು ರೈತರು, ಆಹಾರ ಸಂಸ್ಕರಣಾ ಘಟಕಗಳು, ಹಣ್ಣು-ತರಕಾರಿ ವ್ಯಾಪಾರಿಗಳು, ಬೇಕರಿಗಳು, ಜ್ಯೂಸ್ ಕೇಂದ್ರಗಳು, ಹೂವಿನ ವ್ಯಾಪಾರಿಗಳು, ಹೋಟೆಲ್‌ಗಳು ಹಾಗೂ ಇತರ ಉದ್ಯಮಿಗಳಿಗೆ ಸುರಕ್ಷಿತ ಮತ್ತು ಗುಣಮಟ್ಟದ ಶೈತ್ಯ ಸಂಗ್ರಹಣಾ ಸೌಲಭ್ಯವನ್ನು ಒದಗಿಸಲಿದೆ.
ಈ ಯೋಜನೆಯ ಯಶಸ್ಸಿಗೆ ಸಹಕರಿಸಿದ ಎಲ್ಲಾ ಗಣ್ಯರು, ಸದಸ್ಯರು, ನಿರ್ದೇಶಕರು, ಸಿಬ್ಬಂದಿ, ರೈತರು, ಗ್ರಾಹಕರು ಹಾಗೂ ಹಿತೈಷಿಗಳಿಗೆ ಗ್ರಾಮಜನ್ಯದ ಹೃತ್ಪೂರ್ವಕ ಧನ್ಯವಾದಗಳು.
"ರೈತರ ಬೆಳವಣಿಗೆಯೇ ಗ್ರಾಮಜನ್ಯದ ಧ್ಯೇಯ." 🌱
#ಗ್ರಾಮಜನ್ಯ #ಶೈತ್ಯಾಗಾರ #ಪುತ್ತೂರು #ರೈತರು #ಕೃಷಿ #ಆಹಾರಸಂಸ್ಕರಣೆ #ರೈತಉತ್ಪಾದಕಕಂಪನಿ #ದಕ್ಷಿಣಕನ್ನಡ #ಆತ್ಮನಿರ್ಭರಭಾರತ